ಕಾವ್ಯ ಸಂಗಾತಿ
ಭಾರತಿ ರವೀಂದ್ರಅಹ್ಮದಾಬಾದ್
ಹಾಯ್ಕಗಳು
ಮಣ್ಣಿನ ಕೂಜ
ತತ್ವ ಹೇಳಿದೆ, ಇರು
ನೀನು ತಣ್ಣಗೆ.
2)ಮೋಹದ ಕೂಪ
ಬದುಕಿಗೊಂದು ಶಾಪ
ಅರಿತು ಬಾಳು.
3) ಬೆಕ್ಕಿನ ಮನ
ಉಡಲು ಕಾವಿ ಬಟ್ಟೆ
ಸಿಕ್ಕಿ ತೆ ಮೋಕ್ಷ.
4) ನಲ್ಲನೇ ಕೇಳು
ಪ್ರೀತಿಯ ಕಾವು, ಬಾಳು
ಬೆಳದಿಂಗಳು.
5) ಮನದ ಓಣಿ
ನೆನಪು ಗಳ ಮೇಳ
ಬಾಳ ಸಂಜೆಗೆ
6)ಬಾನ ತುಂಬೆಲ್ಲಾ
ಹಕ್ಕಿಗಳದೇ ಓಳಿ
ಚಂದ್ರ ನಾಚಿದ.
7) ಒಲವ ಕಿಡಿ
ನೋಡು ಒಮ್ಮೆ ಉರಿಸಿ
ಹೃದಯ ಜ್ಯೋತಿ.
8) ನೋವು ಸಂಕಟ
ಎಂದೇoದೂ ಸುಳಿಯದು
ನಲ್ಲನ ಸಂಗ.
9) ಕಂದ ನಕ್ಕರೆ
ಹೂ ಮಳೆ ಸುರಿದಂತೆ
ದೇವ ವಿಸ್ಮಯ.
10) ಸೋನೆ ಸುರಿದು
ಇಳೆಯು ನಗುತಿರಲು
.ಪ್ರಕೃತಿ ಗಾನ.
ಭಾರತಿ ರವೀಂದ್ರ ಅಹ್ಮದಾಬಾದ್